Friday, January 6, 2012

ಆ ಕಾಣದ ಕೈಯ ಆಟ ಎಷ್ಟು ನಿಗೂಢ!!!!








ಆ ಕಾಣದ ಕೈಯ ಆಟ ಎಷ್ಟು ನಿಗೂಢ
ಒಮ್ಮೆ ಭ್ರಮನಿರಸನ
ಒಮ್ಮೆ ಪ್ರೇಮಾಲಿಂಗನ..
ಒಮ್ಮೆ ಕಣ್ಣೀರ ಧಾರೆ
ಮತ್ತೊಮ್ಮೆ ಮನಸೆಲ್ಲ ಸೂರೆ
... ಒಮ್ಮೆ ಮನಸು ಮುದ್ದು ಕೂಸು
ಮತ್ತೊಮ್ಮೆ ಹುಚ್ಚು ಕುದುರೆ
ಒಮ್ಮೆ ನೀಲಿಯ ತಿಳಿ ಆಕಾಶ
ಮತ್ತೊಮ್ಮೆ ಕಲುಕಿದ ನಿಂತ ನೀರು
ಒಮ್ಮೆ ಎಲ್ಲಿಲ್ಲದ ಉತ್ಸಾಹ
ಮತ್ತೊಮ್ಮೆ ಮುದುಡಿದ ಮೊಗ್ಗು
ಒಮ್ಮೆ ಎಂತಹ ಆತ್ಮೀಯತೆ
ಮತ್ತೊಮ್ಮೆ ಉಕ್ಕುವುದು ತಾತ್ಸಾರ
ಒಮ್ಮೆ ಮನಸ್ಸು ಅದೆಷ್ಟು ಕರುಣಾಮಯಿ
ಮತ್ತೊಮ್ಮೆ ಭಾವನೆಗಳೇ ಇಲ್ಲದ ಕಲ್ಲು
ಒಮ್ಮೆ ಸ್ನೇಹದ ಸ್ಪಂದನ
ಮತ್ತೊಮ್ಮೆ ದ್ವೇಷದ ಜ್ವಾಲೆ..

ಏಕೆ ಹೀಗೆ?
ತಿಳಿಯದಾಗಿದೆ ಉತ್ತರ!!!

No comments:

Post a Comment