Tuesday, February 7, 2017

ಬಣ್ಣದೋಕುಳಿ

ಪ್ರೀತಿಯ ಪ್ರತಿ ಕ್ಷಣವ ಪ್ರತಿ ನೆನಪುಗಳು ಗಟ್ಟಿಯಾಗಿವೆ..
ಒಂದೊಂದೂ ಪುಗ್ಗೆಯಾಗಿ ಮನಸಿನಂಗಳದಿ ಸ್ವಚ್ಛಂದವಾಗಿ  ಹಾರಿವೆ..
ಒಂದಕ್ಕೊಂದು ಡಿಕ್ಕಿ ಹೊಡೆದಾಗ  ಬಣ್ಣ ಬಣ್ಣಗಳ ಪ್ರೀತಿ ಹುಚ್ಚಾಟ ಕಚ್ಚಾಟ..
ನಗು ಮತ್ತು ಅಳುವಿನ ಹಗ್ಗ ಜಗ್ಗಾಟ

Wednesday, August 28, 2013

ಮಳೆ......


ಸುದ್ದಿ ನೀಡದೆ ಆಗಮಿಸಿತು ನಿನ್ನ ಪ್ರೀತಿಯ ಮುಂಗಾರು
ಹಿಂದಿರುಗುವ ಮಾತಿಲ್ಲದೆ ಸುರಿಯುತಿದೆ ನಿನ್ನೊಲವಿನ ಹಿಂಗಾರು
ಹಿತ ನೀಡಿದೆ ಹನಿ  ಕಡಿಯದೇ ಜಿನುಗುತಿರುವ ಸಿಹಿ ತುಂತುರು


Monday, June 4, 2012

ಹೊರಟೆ ನೀ ಇರುವಲ್ಲಿಗೆ... ಭಾವದಾಚೆಯ ಬಣ್ಣದೂರಿಗೆ ..
ಹೊರಟೆ.. ಹೊರಟೆ ..ನೀ ಇರುವಲ್ಲಿಗೆ
ಭಾವದಾಚೆಯ  ಬಣ್ಣದೂರಿಗೆ
ಯಾರೂ ನೋಡಿರದ  ನಮ್ಮಿಬ್ಬರ ನಲುಮೆಯ ನಾಡಿಗೆ
ಮಧುರ ಮಾತಿನ ಕಂಪಿರುವ ಕೇರಿಗೆ

ಹೆಜ್ಜೆ  ಹೆಜ್ಜೆಗೂ ನಿನ್ನದೇ ನೆನಪು
ಒಮ್ಮೆಯೂ ಒಂಟಿ ಎನಿಸಿಲ್ಲ
ಸದಾ ನಿನ್ನೊಲವಿನ ಸಾಂಗತ್ಯ
ನಿನ್ನ ಸೇರುವು ಹುಚ್ಚು ಹುರುಪು
ಚೂರು ಆಯಸವೆನಿಸಿಲ್ಲ
ಮನದಲ್ಲಿ ನಿನ್ನದೇ ಪಾರುಪತ್ಯ

ನಾ ಕಂಡ ಕನಸು ನೀನು
ನಿನ್ನ ಸೇರೆ ಸೇರುವೆ ನಾನು
ಹೆಚ್ಚೇನು ದೂರವಿಲ್ಲ ನಿನ್ನ ಒಲವಿನೂರಿಗೆ
ನಿನ್ನ ಗಮ್ಮನೆ ನೆನಪು ತಂಗಾಳಿಯಾಗಿ ಮೈಸೋಕಿದೆ
ನಿನ್ನ ತೋಳು ಸೇರಿ ಅಪ್ಪುಗೆಯಲಿ ಕರಗುವೆ
ನನ್ನ ಒಂದೇ ಗುರಿ ನೀನು...

Saturday, March 17, 2012

ಗೆಳತಿ..ನಮ್ಮ ಗೆಳೆತನ... ಮೃಷ್ಟಾನ್ನ ಬೋಜನ .. ಏನಂತಿಯಾ???

ನನಗಿಂತ ಬೇರೆಯವರಿಗೆ ನಿನ್ನ ಚಿಂತೆ ಹೆಚ್ಚಿರುವಂತಿದೆ
ಒಂದೇ ಪ್ರಶ್ನೆ ಎಲ್ಲರದು..
ಅವಳಿಲ್ಲದೆ ಹೇಗೆ ಇರುವೆ...?
ಇದೆಂಥ ಪ್ರಶ್ನೆ ಎಂದು ನಿನಗೂ ನಗು ಬರುವುದಿಲ್ಲವೇ
ಸ್ನೇಹ ಪ್ರೀತಿ ಎಂದರೆ ಎದುರು-ಬದುರು ಇರಬೇಕೆಂದೆನಿದೆ
ನಿನ್ನ ಪ್ರೋತ್ಸಾಹದ ಮಾತು,
ನಿನ್ನ ಬೆಚ್ಚಗಿನ ಪ್ರೀತಿಯ ಮಾತು
ಸ್ನೇಹದ ಹುಸಿ ಮುನಿಸು
ಅಕ್ಕರೆಯ ತಾಯಿಯಂತ ಸಕ್ಕರೆಯ ಪ್ರೀತಿ
ಈ ಎಲ್ಲವೂ ನನ್ನೊಂದಿಗೆ ಇರುವಾಗ
ನಾ ಹೇಗೆ ಒಂಟಿ ಹೇಳು?
ಸದಾ ಸ್ಪೂರ್ತಿಯ ಸೆಲೆಯಾದ ನಮ್ಮ ಭಾವ ಭಾಂದವ್ಯಕ್ಕೆ
ಸಂಬಂಧದ  ನಿರ್ಬಂಧವೇಕೆ
ನಿರಂತರ, ನಿತ್ಯ ನೂತನವಾದ ಪ್ರೀತಿಗೆ
ಹೆಸರಿನ ಸಂಕೋಲೆಯೇಕೆ
ಅಚ್ಚಳಿಯದೆ ಉಳಿದಿರುವ ಸ್ವಚ್ಚವಾದ ಸ್ನೇಹ ಪ್ರೀತಿ ನಮ್ಮೊಡನೆ ಇರುವಾಗ
ಯಾರ ಹೊಟ್ಟೆಯಲ್ಲಿ ಕಿಚ್ಚು ಹೊತ್ತಿದರೆನಂತೆ ;)
ನಮ್ಮ ನಂಟು, ಸ್ನೇಹದ ಗಂಟು,
ಹಂಚಿಕೊಳ್ಳುತ್ತಲೇ ಇರೋಣ
ನೆನಪಿನ ಸಿಹಿಯ ನೆಂಚಿಕೊಳ್ಳುತ್ತಲೇ  ಇರೋಣ..
ಗೆಳತಿ..ನಮ್ಮ ಗೆಳೆತನ... ಮೃಷ್ಟಾನ್ನ ಬೋಜನ .. ಏನಂತಿಯಾ???
ಹ್ಹಾ ಹ್ಹಾ ಹ್ಹಾ...
                                             
                                                                             ಇಂತಿ
                                                                               ***ನಿನ್ನ ಹೊಟ್ಟೆಬಾಕ ಗೆಳೆಯ ;)***

Friday, January 13, 2012

ಕಾಡದಿರು...ಗೆಳತಿ


ಗೆಳತಿ ನಮ್ಮ ಪ್ರೀತಿಗೆ ಬೇಕಿಲ್ಲ ಯಾವುದೇ ವಿಶ್ಲೇಷಣೆ
ನಾ ಮಾಡಲಾರೆ ನನ್ನ ಪ್ರೀತಿಯ ನಿರೂಪಣೆ
ನೀ ನನಗೆ ಕೊಟ್ಟ ದಿನದಂದೇ ಅಪ್ಪಣೆ
ನಾ ಮಾಡಿದೆ ನನನ್ನೇ ನಿನಗೆ ಅರ್ಪಣೆ
ನಿನಗೆಂದೇ ನಾ ಮೀಟಿದೆ ನನ್ನ ಹೃದಯದ ವೀಣೆ
ನಿನ್ನ ಹೊರತು ನಾ ಬೇರೆ ಏನು ಕಾಣೆ
ಯಾಕೆ ನನ್ನಲ್ಲಿ ಇಂತಹ ಧೋರಣೆ
ಈ ನಿನ್ನ ಪ್ರೇಮಿಯಲ್ಲಿ ಇರಲಿ ಕರುಣೆ
ಹೀಗೆ ನೀ ನನ್ನ ಕಾಡಿದರೆ
ನನ್ನುಸಿರೇ ನಿಂತು ಹೋದೀತು.. ನನ್ನಾಣೆ...

Monday, January 9, 2012

just ನಿನಗಾಗಿ :)


ನನ್ನ ಗೆಳೆಯ
ಇದು ಜಸ್ಟ್ ನಿನಗಾಗಿ
ನಮ್ಮಿಬ್ಬರ ಇಷ್ಟು ವರ್ಷಗಳ
ಎಂದು ಮುಗಿಯದಿರುವ ಸ್ನೇಹಕ್ಕಾಗಿ :)

ಸ್ನೇಹ ಶುರುವಾಗಿ ಇನ್ನು ಕೆಲವೇ ದಿನಗಳಾದಂತಿದೆ
ಆದರೆ ಅದಾಗಲೇ ಏಳು ಬಣ್ಣಗಳ ಕಾಮನ ಬಿಲ್ಲಿನಂತ-
-ಏಳು ವರ್ಷಗಳೇ ನಡೆದಾಗಿದೆ ಜೊತೆಗೆ..
ಜೀವನಕ್ಕೆ ಸುಂದರವಾದ ಸ್ನೇಹದ ಬಣ್ಣ ತುಂಬಿದೆ
ಸಪ್ತ ಸ್ವರಗಳ ಮಾಧುರ್ಯ ಮಿಡಿದೆ

ನಿನ್ನ ಬಗ್ಗೆ ಬರೆದು ಬರೆದು
ಎಂದು ದಣಿವಾಗಲೇ ಇಲ್ಲ
ಈ ಲೇಖನಿಗೆ ಎಂದು ಪದಗಳ
ಕೊರತೆ ಎದುರಾಗಲೇ ಇಲ್ಲ
ಬರೆದಷ್ಟು ಕವಿತೆಗಳ ಲೆಕ್ಕ ಹೆಚ್ಚಾಗುತ್ತಲೇ ಇವೆ
ಮಾತಾಡಿದಷ್ಟು ಸ್ನೇಹ ಗಟ್ಟಿಯಾಗುತ್ತಲೇ ಇದೆ

ನಿನ್ನ ಜೊತೆ ಜೊತೆಗೆ ನಡೆಯುತಿರಲು
ದಣಿವಿನ ಮಾತೆಲ್ಲಿ
ನೀ ನನ್ನ ಮೊಗದ ನಗುವಾಗಿರಲು
ಅಳುವ ಮಾತೆಲ್ಲಿ
ನೀನೇ ಪ್ರೀತಿಯಾಗಿರಲು
ಧ್ವೇಷಕೆ ಜಾಗವೆಲ್ಲಿ

ಈ ಮಧುರವಾದ ಭಾಂಧವ್ಯ
ಸದಾಕಾಲ ಹೀಗೆ ಇರಲಿ
ನಮ್ಮ ಹಾಲು ಜೇನಿನಂತ ಸ್ನೇಹ
ಇದೆ ರೀತಿ ಜನುಮ ಜನುಮದಲ್ಲು
ನಮಗೆ ಸಿಹಿ ಹಂಚುತಿರಲಿ...

ನನ್ನ ಪ್ರಿಯ ಗೆಳೆಯ..
U R  THE  BEST

Friday, January 6, 2012

ಆ ಕಾಣದ ಕೈಯ ಆಟ ಎಷ್ಟು ನಿಗೂಢ!!!!
ಆ ಕಾಣದ ಕೈಯ ಆಟ ಎಷ್ಟು ನಿಗೂಢ
ಒಮ್ಮೆ ಭ್ರಮನಿರಸನ
ಒಮ್ಮೆ ಪ್ರೇಮಾಲಿಂಗನ..
ಒಮ್ಮೆ ಕಣ್ಣೀರ ಧಾರೆ
ಮತ್ತೊಮ್ಮೆ ಮನಸೆಲ್ಲ ಸೂರೆ
... ಒಮ್ಮೆ ಮನಸು ಮುದ್ದು ಕೂಸು
ಮತ್ತೊಮ್ಮೆ ಹುಚ್ಚು ಕುದುರೆ
ಒಮ್ಮೆ ನೀಲಿಯ ತಿಳಿ ಆಕಾಶ
ಮತ್ತೊಮ್ಮೆ ಕಲುಕಿದ ನಿಂತ ನೀರು
ಒಮ್ಮೆ ಎಲ್ಲಿಲ್ಲದ ಉತ್ಸಾಹ
ಮತ್ತೊಮ್ಮೆ ಮುದುಡಿದ ಮೊಗ್ಗು
ಒಮ್ಮೆ ಎಂತಹ ಆತ್ಮೀಯತೆ
ಮತ್ತೊಮ್ಮೆ ಉಕ್ಕುವುದು ತಾತ್ಸಾರ
ಒಮ್ಮೆ ಮನಸ್ಸು ಅದೆಷ್ಟು ಕರುಣಾಮಯಿ
ಮತ್ತೊಮ್ಮೆ ಭಾವನೆಗಳೇ ಇಲ್ಲದ ಕಲ್ಲು
ಒಮ್ಮೆ ಸ್ನೇಹದ ಸ್ಪಂದನ
ಮತ್ತೊಮ್ಮೆ ದ್ವೇಷದ ಜ್ವಾಲೆ..

ಏಕೆ ಹೀಗೆ?
ತಿಳಿಯದಾಗಿದೆ ಉತ್ತರ!!!