Sunday, May 29, 2011

ಸಂಬಂಧ?..ನಂಬಿಕೆ?..ಬದುಕಿನ ನಿತ್ಯ ಸತ್ಯ..?


ಸಂಬಂಧಗಳು ಕೆಲವೊಮ್ಮೆ ಎಷ್ಟೊಂದು ಗಟ್ಟಿ
ಕೆಲವೊಮ್ಮೆ ನಾವು ಅಂದುಕೊಂಡದ್ದಕ್ಕಿಂತ ಟೊಳ್ಳು
ಪಾಯವೇ ಬರಿ ಹಸಿ ಸುಳ್ಳು

ಮಾತೇ ಹೆಚ್ಚು ನಂಬಿಕೆಗಿಂತ
ಒಂದೇ ಒಂದು ಸಣ್ಣ ಬಿರುಕು ಸಾಕು
ನಿಮಿಷದಲ್ಲೇ ಸಂಬಂಧವೆಂಬ ಗಾಳಿ ಗೋಪುರ ಬುಡಮೇಲು

ಕೆಲವರಿಗೆ ಮುಗಿಯದ ಪ್ರೀತಿಯ  ಅಮಲು
ಮತ್ತೊಬ್ಬರಿಗೆ ಜೀವನವಿಡಿ ನೋವಿನ ನಶೆ
ಸದಾ ಅಗಲುವಿಕೆಯ ದಿಗಿಲು
ಒಮ್ಮೆ ಮನಸ್ಸು ಹೂವಷ್ಟು ಹಗುರ
ಮಗದೊಮ್ಮೆ ಬಿಕ್ಕಳಿಸುವುದು.. ನೋವು ಅಪಾರ
ಒಮ್ಮೆ ನಿಗೂಢ..ಕ್ಲಿಷ್ಟ..ಗಣಿತದ ಸಮಸ್ಯೆಯಂತೆ..
ಮತೊಮ್ಮೆ ಹೂ ಕಂಪು..ಮನ ತಂಪು..ಸಿಹಿ ಉತ್ತರ

ಯೋಚಿಸಿದಷ್ಟು ಜಟಿಲ..
ಬಿಡಿಸಿದಷ್ಟು ಕಗ್ಗಂಟು..
ಬದುಕಿನ ಚೌಕಬರ..ಗುರಿ ಮುಟ್ಟಿದರು ಮುಟ್ಟಬಹುದು
ಇಲ್ಲ ಯಾವುದೊ ಬಿರುಕಿಂದ ಸಂಬಂದವೇ ಚಿತ್ತಾಗಬಹುದು..

ಕೊನೆಗೆ ಹೇಳಬಹುದಾದದ್ದು ಒಂದೇ ಮಾತು...
ಅವರವರ ಬಾವಕ್ಕೆ ತಕ್ಕಂತೆ ಬಕುತಿ...
ಪಾಲಿಗೆ ಬಂದದ್ದು ಪಂಚಾಮೃತ...
ಇದೇ ಬದುಕಿನ ನಿತ್ಯ ಸತ್ಯ...


                                                                 ***ರಂಜನಿ ಎಸ್ ಬಳಿಸಾವಿರ್***


Tuesday, May 24, 2011

ಬಿಡುಗಡೆ.....


ನಾ ಗೆದ್ದೇ..
ಸೋಲಿಂದ ಮೇಲೆದ್ದೆ..
ಹೊಸ ಗಾಳಿ ಹೊಸ ಮುಗಿಲು..
ಹೊಸ ಹೆಜ್ಜೆ ಹೊಸ ಹರವು
ಮೆಟ್ಟಿ ನಿಂತೇ ಎಲ್ಲಾ ಎಲ್ಲೇ
ನಾ ಎಲ್ಲವನು ಗೆಲ್ಲಬಲ್ಲೆ

ನಿನ್ನ ಯಾವುದೇ ಚ್ಚುಚ್ಚು ನುಡಿ ನನಗಿನ್ನು ಕೇಳಿಸದು  
ನಮ್ಮಿಬರ  ಹೆಜ್ಜೆ ಮತ್ತೆಂದು ಒಂದಾಗದು
ಕಣ್ನೀರೆಂದು ಹೊರಹೊಮ್ಮದು..

ಇಂದು ಬಿಡುಗಡೆಯಾಗಿದೆ
ಮನಸ್ಸು ಹೊಸ ದಿಗಂತದಲ್ಲಿ ಗೆಲುವಿನ ಹೆಸರು ಬರೆದಾಗಿದೆ
ನೀನು ನನ್ನನ್ನು ಒಬ್ಬೊಂಟಿಯಾಗಿ ಬಿಟ್ಟುಹೋದ ಆ ದಾರಿ ಸವೆದು
ಹೊಸ ವಸಂತ ಹೊಸ ಹಸಿರು ಹೊಸ ಹಾದಿ ಮೂಡಿದೆ
ಎಲ್ಲೆಡೆ ವನರಾಶಿಯ ತಳಿರು ತೋರಣ ಅತಿ ಮುದ್ದಿನಿಂದ ಸ್ವಾಗತಿಸಿದೆ

ಗೆಳೆತಿ ಗೆಲ್ಲುವೆ
ನೀ ಗೆದ್ದೇ ಗೆಲ್ಲುವೆ ಎಂದು
ಆ ಕೋಗಿಲೆ ಎಷ್ಟು ಸೊಗಸಾಗಿ  ಇನಿ ದನಿಯಲ್ಲಿ ಹಾಡಿದೆ..
ಬಟ್ಟಲು ಕಂಗಳಲ್ಲಿ ಮತ್ತೆ ಹೊಸ ನೂರಾಸೆ ಚಿಗುರಿದೆ..

                                                          ***ರಂಜನಿ ಎಸ್ ಬಳಿಸಾವಿರ್***

Friday, May 20, 2011

ನನ್ನಮ್ಮ...

ನನ್ನಮ್ಮ.. ಕನ್ನಡಮ್ಮ
ಒಬ್ಬಳು ಹಡೆದ್ದವ್ವ..
ಭರತ ಮಾತೆ ನಮ್ಮ ಹೊತ್ತವ್ವ..
ಕನ್ನಡಮ್ಮನ ಕಂದಮ್ಮಗಳೇ
ಯಾಕಿಷ್ಟು ದುರಾಸೆ
ಹೆತ್ತಮ್ಮನ ಬಿಟ್ಟು ಪರದೇಸಿಗಳಾಗುವಾಸೆ
ದುಡ್ಡಿನ ವ್ಯಾಮೋಹಕ್ಕೆ ತಾಯಿಯನ್ನೇ ತೊರೆವ ಅತಿಯಾಸೆ.
ದುಡ್ಡಿನಾಸಿಗೆ ಹುಟ್ಟಿದ ಮನೆಯನ್ನೇ ತೊರೆಯುವಿರಿ
ಒಡಹುಟ್ಟಿದವರ ಮರೆಯುವಿರಿ..
ಅತಿ ಆಸೆ ಮಿತಿ ಮೀರಿದರೆ ಗತಿ ಕೇಡೆ
ಇಲ್ಲೇ ಎಷ್ಟು ಸೊಗಸಿದೆ
ಕನ್ನಡಮ್ಮನ ಭಾರತ ಮಾತೆಯೇ ನಿಷ್ಕಲ್ಮಶ ಪ್ರೀತಿಯಿದೆ
ಹಸಿರು ಎಲ್ಲೆಡೆ ಹಾಸು ಹಾಸಿದೆ
ನಮ್ಮವರ ಮುಗ್ದ ಆಥಿತ್ಯವಿದೆ
ಬನ್ನಿ ಒಟ್ಟಿಗೆ  ಉತ್ತಿ ಬಿತ್ತುವ
ಬಂಗಾರ ಬೆಳೆಯುವ
ಮನದಲ್ಲಿ ಛಲವಿದೆ
ಕೈಯಲ್ಲಿ ಬಲವಿದೆ
ಒಬ್ಬರೇ ಗೆದ್ದರೆ ಏನು ಹಿತವಿದೆ
ಬನ್ನಿ ಒತ್ತಗೆ ಗೆಲ್ಲುವ
ನಮ್ಮೆಲ್ಲರ ಗೆಲುವನ್ನ ಇತಿಹಾಸದ ಪುಟಗಳಲ್ಲಿ ಸುವರ್ನಾಕ್ಷರದಲ್ಲಿ ಬರೆಯೋಣ...

ಅಂತರ......



ಪ್ರೀತಿ ಮಾತು ಕಡಿಮೆಯಾದ್ದೆಂದು ತಿಳಿಯಲೇ ಇಲ್ಲ
ಜೊತೆಗಿದ್ದರು ನಡುವೆ ಯಾಕಿಷ್ಟು ಅಂತರ ತೋಚಲೇ ಇಲ್ಲ
ಮಾತುಗಳೆಲ್ಲ ಕರಗಿದವೆಂದೋ
ಮೌನ ನಮ್ಮಿಬರ ನಡುವೆ ಮನೆ ಮಾಡಿದ್ದೆಂದೋ
ಸರಿಗಳೆಲ್ಲ ತಪ್ಪಾದವು..
ಸಿಹಿ ಮಾತು ಬತ್ತಿ ಹೋದವು
ಕಣ್ಣುಗಳು ಶೂನ್ಯದೆಡೆಗೆ
ಮುಂಚಿನ ಆಹ್ಲಾದ ಈಗಿಲ್ಲ
ಚ್ಚುಚಿ ಕೊಲ್ಲುತಿದೆ ಈ ಮೌನ
ಬತ್ತಿ ಬಾಡಿಹೋಗಿದೆ ಸ್ನೇಹ
ಈಗಲಾದರೂ ಎಚ್ಚೆತುಕೋ..
ಇಷ್ಟು ದಿನದ ಈ ಸ್ನೇಹವ ಉಳಿಸಿಕೋ
ಪ್ರೀತಿನ ಕಣ್ಣ ರೆಪ್ಪೆಯಲ್ಲಿಟ್ಟು ಕಾಪಾಡಿಕೋ..

                                                   ***ರಂಜನಿ ಎಸ್ ಬಳಿಸಾವಿರ್***      


Sunday, May 15, 2011

ನನ್ನ ಪ್ರೀತಿಯ ಕೊಡೆ ಹಿಡಿದು ನಿನಗಾಗೆ ಕಾದಿರುವೆ...

ಹಸಿ ಹಸಿ ಚಳಿಯಲ್ಲಿ ನಿನ್ನ ಸಿಹಿ ಸವಿ ನೆನಪು,
ತಂಪಾದ ನೆನಪೊಂದಿಗೆ  ಒಂದು ಬಿಸಿ ಚಹಾದ ಗುಟುಕು,
ಸೂರ್ಯ ಕೂಡ ಆಲಸಿಯಾದ
ಬೆಚ್ಚಗೆ ಮೋಡಗಳ ಚಾದರ ಹೊದ್ದು

ನಾ ನಿನ್ನ ಪ್ರೀತಿಗೆ ಕರಗಿ ನೀರಾದಂತೆ
ಬೆಂಬಿಡದ ಅದೇ ಸೋನೆ ಮಳೆ
ಹುಸಿ ಮುನಿಸಿನ ಗುಡುಗು
ನಿನ್ನಷ್ಟೇ ಸೊಗಸು ಆ ನಿನ್ನ ನೆನಪು
ಅದರಷ್ಟೇ ಸೊಗಸು ಮಳೆಗಾಲದ ನನ್ನ ನಿನ್ನ ನೆನಪಿನ ಪುಟಗಳು

ನಾ ಮೊಂಡು ಹಿಡಿದಾಗ ಕೆನ್ನೆ ಹಿಂಡಿ ತಲೆಗೆ ಮೊಟುಕಿ-
ಸುಮ್ಮನಾಗಿಸುವ ಆ ನಿನ್ನ ಮುದ್ದು ಪ್ರೀತಿ
ನನ್ನ ತುಂಟುತನಕ್ಕೆ ಕಿವಿ ಹಿಂಡಿದ ಆ ನಿನಪು..
ನಿನಗೆಂದೇ ನಾ ಬರೆದ ಆ ಎಲ್ಲ ಕವನಗಳ ನೋಡಿ
ಅರಳುತಿದ್ದ ಆ ಬಟ್ಟಲು ಕಂಗಳು..
ನಾ ಮಗುವಂತೆ ಹಠ ಹಿಡಿದಾಗ ನೀನಿತ್ತ ಕೈತುತ್ತೂಟ
ಎಲ್ಲರಂತಲ್ಲ ಈ ನನ್ನ ಹುಚ್ಚು ಹುಡುಗಿ ಎಂದು
ನೀ ತೋರಿದ ಆ ಅಭಿಮಾನ.. ಆ ಮುದ್ದು ಪ್ರೀತಿ

ಎಲ್ಲಾ ಸಿಹಿ ಎಲ್ಲಾ ತಂಪು..ಎಲ್ಲ ಹೊಸತು
ಮೊದಲ ಮಳೆಗೆ ಆ ಭೂಮಿ ಸೂಸಿದ ಹೊಚ್ಚ ಹೊಸ ಕಂಪಂತೆ
ಇಂದಿನ ದಿನದ ಕೊನೆಯ ಹನಿ ಸೂರಿಂದ ಜಾರುವ ಮೊದಲು
ಬೇಗ ನೀ ಬಂದು ಬಿಡು

ಎಲ್ಲಿದ್ದರು ನನ್ನ ನೆನಪಲ್ಲಿ ನೀ ಬೆಚ್ಚಗೆ ಕುಳಿತಿರುವೆ
ನಾನಿಲ್ಲಿ ನನ್ನ ಪ್ರೀತಿಯ ಕೊಡೆ ಹಿಡಿದು ನಿನಗಾಗೆ ಕಾದಿರುವೆ
                                                       ***ರಂಜನಿ ಎಸ್ ಬಳಿಸಾವಿರ್*** 

Monday, May 2, 2011

ಮುದ್ದು ಚಂದಿರ.....

ಮುದ್ದು  ಚಂದಿರ ...
ಯಾಕೀ ನಾಚಿಕೆ..
ನನ್ನ ದೃಷ್ಟಿ ತಾಕುವುದೆಂದೋ?
ಹಾಗೇನಿಲ್ಲ..ಅದಾಗಲೇ ನಿನ್ನ ಕೆನ್ನಯ ಮೇಲೆ ಕಪ್ಪು ಬೊಟ್ಟು ಇಟ್ಟಾಗಿದೆ..
ಆ ತಂಪು ಗಾಳಿ.. ಆ ಮೋಡಗಳ ಮರೆಯಲ್ಲಿ ನಿನ್ನ ತುಂಟಾಟ.. ಎಷ್ಟು ಸೊಗಸು
ನಿನ್ನ ತುಂಬು ಮೊಗ ನೋಡಿ ಯಾಕೋ ಉಕ್ಕಿಬಂದಿದೆ ಮುದ್ದು..
ನಾ ಚಿಕ್ಕವಳಿದ್ದಾಗ ಕೈ ತುತ್ತು ತಿನ್ನುತ್ತ ನೋಡಿದ್ದ ಆ ನೀನು ಈಗಲೂ ಅಷ್ಟೇ ಸುಂದರ..
ನಿನ್ನ ಚೆಲುವಷ್ಟೇ ಆ ನೆನಪುಗಳು ಅತಿ ಮಧುರ..
ನಿನ್ನ ನೋಡಿದಾಗಲೆಲ್ಲ ನೆನಪಾಗುವುದು ನನಗೊಂದು ಮಾತು
ಕಾಲ ಬದಲಾದಂತೆಲ್ಲ ಬದಲಾಗುವುದು ನಿನ್ನ ರೂಪು..
ಹಾಗೆಯೇ ತಾನೇ ನಮ್ಮ ಜೀವನ ಕೂಡ,
ಇಂದು ಹುಣ್ಣಿಮೆ.. ಪ್ರಕಾಶಮಾನ..ನಗು ಬಹುಮಾನ
ಮತೊಮ್ಮೆ ಅಮಾವಾಸ್ಯೆ.. ಕಾರ್ಗತ್ತಲ್ಲು.. ಯಾರು ಕಾಣರು ಸುತ್ತಲು..
ನಿನ್ನಲ್ಲಿನ ಧೈರ್ಯ ನನಗು ಚೂರು ಕೊಡು..
ನನ್ನಲ್ಲಿನ ಬದಲಾವಣೆಯ ಆಗ ನೀನೆ ನೋಡು..
ನಾವಿಬ್ಬರು  ಕೂಡಿ  ಮಾತಾಡೋಣ  ಇಬ್ಬರು ನಡೆದು  ಬಂದ  ಸ್ನೇಹದ ಜಾಡು..
ನನ್ನ ಒಂಟಿತನಕ್ಕೆ ನೀ ಜೊತೆಯಾದ ಹಾಡು..
ನನಗೆ ನೀ ಜೊತೆಯಾಗಿ ಸ್ಪೂರ್ತಿಯಾದೆ..
ನಿನ್ನ ಗೆಳತಿಯಾದೆ ನಾನು..
ಈ ನಮ್ಮಿಬರ ಗೆಳೆತನ ಹಾಲಲ್ಲಿ ಬೆರೆತ ಜೇನು..

*** ರಂಜನಿ ಎಸ್ ಬಳಿಸಾವಿರ್ ***