Friday, May 20, 2011

ಅಂತರ......



ಪ್ರೀತಿ ಮಾತು ಕಡಿಮೆಯಾದ್ದೆಂದು ತಿಳಿಯಲೇ ಇಲ್ಲ
ಜೊತೆಗಿದ್ದರು ನಡುವೆ ಯಾಕಿಷ್ಟು ಅಂತರ ತೋಚಲೇ ಇಲ್ಲ
ಮಾತುಗಳೆಲ್ಲ ಕರಗಿದವೆಂದೋ
ಮೌನ ನಮ್ಮಿಬರ ನಡುವೆ ಮನೆ ಮಾಡಿದ್ದೆಂದೋ
ಸರಿಗಳೆಲ್ಲ ತಪ್ಪಾದವು..
ಸಿಹಿ ಮಾತು ಬತ್ತಿ ಹೋದವು
ಕಣ್ಣುಗಳು ಶೂನ್ಯದೆಡೆಗೆ
ಮುಂಚಿನ ಆಹ್ಲಾದ ಈಗಿಲ್ಲ
ಚ್ಚುಚಿ ಕೊಲ್ಲುತಿದೆ ಈ ಮೌನ
ಬತ್ತಿ ಬಾಡಿಹೋಗಿದೆ ಸ್ನೇಹ
ಈಗಲಾದರೂ ಎಚ್ಚೆತುಕೋ..
ಇಷ್ಟು ದಿನದ ಈ ಸ್ನೇಹವ ಉಳಿಸಿಕೋ
ಪ್ರೀತಿನ ಕಣ್ಣ ರೆಪ್ಪೆಯಲ್ಲಿಟ್ಟು ಕಾಪಾಡಿಕೋ..

                                                   ***ರಂಜನಿ ಎಸ್ ಬಳಿಸಾವಿರ್***      


1 comment:

  1. ಗೊತ್ತೇ ಆಗದೆ ಸತ್ತೂ ಹೋಗುವ ಭಾವ ಪ್ರೀತಿ...
    ನಡುವಿನ ಅಂತರ ಸತ್ತು ಹೋಗಲಿ...

    ReplyDelete