Tuesday, May 24, 2011

ಬಿಡುಗಡೆ.....


ನಾ ಗೆದ್ದೇ..
ಸೋಲಿಂದ ಮೇಲೆದ್ದೆ..
ಹೊಸ ಗಾಳಿ ಹೊಸ ಮುಗಿಲು..
ಹೊಸ ಹೆಜ್ಜೆ ಹೊಸ ಹರವು
ಮೆಟ್ಟಿ ನಿಂತೇ ಎಲ್ಲಾ ಎಲ್ಲೇ
ನಾ ಎಲ್ಲವನು ಗೆಲ್ಲಬಲ್ಲೆ

ನಿನ್ನ ಯಾವುದೇ ಚ್ಚುಚ್ಚು ನುಡಿ ನನಗಿನ್ನು ಕೇಳಿಸದು  
ನಮ್ಮಿಬರ  ಹೆಜ್ಜೆ ಮತ್ತೆಂದು ಒಂದಾಗದು
ಕಣ್ನೀರೆಂದು ಹೊರಹೊಮ್ಮದು..

ಇಂದು ಬಿಡುಗಡೆಯಾಗಿದೆ
ಮನಸ್ಸು ಹೊಸ ದಿಗಂತದಲ್ಲಿ ಗೆಲುವಿನ ಹೆಸರು ಬರೆದಾಗಿದೆ
ನೀನು ನನ್ನನ್ನು ಒಬ್ಬೊಂಟಿಯಾಗಿ ಬಿಟ್ಟುಹೋದ ಆ ದಾರಿ ಸವೆದು
ಹೊಸ ವಸಂತ ಹೊಸ ಹಸಿರು ಹೊಸ ಹಾದಿ ಮೂಡಿದೆ
ಎಲ್ಲೆಡೆ ವನರಾಶಿಯ ತಳಿರು ತೋರಣ ಅತಿ ಮುದ್ದಿನಿಂದ ಸ್ವಾಗತಿಸಿದೆ

ಗೆಳೆತಿ ಗೆಲ್ಲುವೆ
ನೀ ಗೆದ್ದೇ ಗೆಲ್ಲುವೆ ಎಂದು
ಆ ಕೋಗಿಲೆ ಎಷ್ಟು ಸೊಗಸಾಗಿ  ಇನಿ ದನಿಯಲ್ಲಿ ಹಾಡಿದೆ..
ಬಟ್ಟಲು ಕಂಗಳಲ್ಲಿ ಮತ್ತೆ ಹೊಸ ನೂರಾಸೆ ಚಿಗುರಿದೆ..

                                                          ***ರಂಜನಿ ಎಸ್ ಬಳಿಸಾವಿರ್***

2 comments:

  1. ಇಂದು ಬಿಡುಗಡೆಯಾಗಿದೆ
    ಮನಸ್ಸು ಹೊಸ ದಿಗಂತದಲ್ಲಿ ಗೆಲುವಿನ ಹೆಸರು ಬರೆದಾಗಿದೆ
    ನೀನು ನನ್ನನ್ನು ಒಬ್ಬೊಂಟಿಯಾಗಿ ಬಿಟ್ಟುಹೋದ ಆ ದಾರಿ ಸವೆದು
    ಹೊಸ ವಸಂತ ಹೊಸ ಹಸಿರು ಹೊಸ ಹಾದಿ ಮೂಡಿದೆ
    ಎಲ್ಲೆಡೆ ವನರಾಶಿಯ ತಳಿರು ತೋರಣ ಅತಿ ಮುದ್ದಿನಿಂದ ಸ್ವಾಗತಿಸಿದೆ


    ಬಟ್ಟಲು ಕಂಗಳಲ್ಲಿ ಮತ್ತೆ ಹೊಸ ನೂರಾಸೆ ಚಿಗುರಿದೆ..

    Positive ಯೋಚನೆಗಳಿದ್ದಾಗ,
    ಭಾವಗಳು ಸುಂದರವಿದ್ದಾಗ,
    ಬದುಕೂ ಸುಂದರ...
    ಬಟ್ಟಲು ಕಂಗಳಲ್ಲಿ ಬಗೆ ಬಗೆ ಕನಸುಗಳು ಮೂಡಲಿ...

    ReplyDelete
  2. ಸತ್ಯವಾದ ಮಾತುಗಳು.. ಯೋಚನೆ positive ಇದ್ರೆ.. ಬದುಕು ಕೂಡ positive ಆಗಿ ಕಾಣಿಸುತ್ತೆ...:)

    ReplyDelete