Sunday, June 5, 2011

ಬರುವೆ ಓಡಿ ಓಡಿ ಒಲಿದು..

ಗೆಳೆಯ ಅದೇ ಹಾದಿ..
ಆಗ ನೀನ್ನಿದ್ದೆ ಜೊತೆಯಾಗಿ..
ನನ್ನ ನಗುವಿಗೆ ನಗುವಾಗಿ..
ಮಾತಿನ ಮಳೆಯಾಗಿ..
ಮುದ್ದಿನ ಗಣಿಯಾಗಿ..
ಈ ಹುಚ್ಚು ಹುಡುಗಿಯ ಮೆಚ್ಚಿನ ಗೆಳೆಯನಾಗಿ...

ಅದೆಲ್ಲೇ ಹೊಂಚು ಹಾಕಿತ್ತೋ ಆ ದುಷ್ಟ ವಿಧಿ
ನಾವೆಂದರೆ ಅದಕ್ಕೇನೋ ಹೊಟ್ಟೆ ಉರಿ..
ಮಾತು ಮಾತಲ್ಲೇ ಮುನಿಸು ನುಸುಳಿತ್ತು
ನಮಗೆ ಅರಿವಾಗುವುದರಲ್ಲೇ ನಗೆ ಮಾಯವಾಗಿತ್ತು..

ವಿಧಿಗಿಂತ ದುಷ್ಟ ನೀನು...
ನನ್ನ ಮೇಲೆ ಕೋಪಿಸಿಕೊಂಡು ನೀ ಹೊರಟು ಹೋಗಿದ್ದೆ
ಈ ಹುಚ್ಚು ಹುಡುಗಿಯ ಆಸೆ ನುಚ್ಚು ನೂರು ಮಾಡಿದ್ದೆ..
ನಾ ನಿನ್ನ ಅದೆಷ್ಟು ಹಚ್ಚಿ ಕೊಂಡಿದ್ದೆ..
ರಚ್ಚೆ ಹಿಡಿದು ನೀ ಬಿಟ್ಟು ಹೋದಲ್ಲೆ ಕುಳಿತಿದ್ದೆ
ನಿನ್ನದೋ ಎಂದಿನಂತೆ ಕಲ್ಲು ಹೃದಯ
ಅಲ್ಲೇ ನನ್ನ ಬಿಟ್ಟು ಮುಖ ತಿರುಗಿಸಿ ಮುನ್ನಡೆದಿದ್ದೆ..

ಥು.. ಕಟುಕ..ನಾನೇ ಬರುತಿರುವೆ ನಿನ್ನ ಬಳಿ..
ನನ್ನಾಣೆ... ಇವಾಗಲಾದರು ನಿನ್ನ ಕಲ್ಲು ಹೃದಯ ಕರಗಲಿ..
ಮತ್ತೆ ನನ್ನ ನಿನ್ನ ಸ್ನೇಹ ಚಿಗುರಲಿ
ಎಲ್ಲರು ಅದನ್ನು ಕಂಡು ಎಂದಿನಂತೆ ಹೊಟ್ಟೆ ಉರಿದುಕೊಳ್ಳಲಿ
ಅದನ್ನು ನೋಡಿ ನಮ್ಮ ಸ್ನೇಹ ಇನ್ನು ಗಟ್ಟಿಯಾಗಲಿ..

                                              -ನಿನ್ನ ಗೆಳತಿ

                                                                 ***ರಂಜನಿ ಎಸ್ ಬಳಿಸಾವಿರ್***







1 comment:

  1. ರಂಜನಿಯವರೇ.....
    ನಮ್ದೂ ಹಾರೈಕೆ ಅದೇ ಕಣ್ರೀ.....
    ಕಲ್ಲು ಕರಗಲಿ......
    ಪ್ರೀತಿ ಹರಿಯಲಿ...

    ಚನ್ನಾಗಿದೆ ಕವನ...

    ReplyDelete