ನನ್ನ ಗೆಳೆಯ
ಇದು ಜಸ್ಟ್ ನಿನಗಾಗಿ
ನಮ್ಮಿಬ್ಬರ ಇಷ್ಟು ವರ್ಷಗಳ
ಎಂದು ಮುಗಿಯದಿರುವ ಸ್ನೇಹಕ್ಕಾಗಿ :)
ಸ್ನೇಹ ಶುರುವಾಗಿ ಇನ್ನು ಕೆಲವೇ ದಿನಗಳಾದಂತಿದೆ
ಆದರೆ ಅದಾಗಲೇ ಏಳು ಬಣ್ಣಗಳ ಕಾಮನ ಬಿಲ್ಲಿನಂತ-
-ಏಳು ವರ್ಷಗಳೇ ನಡೆದಾಗಿದೆ ಜೊತೆಗೆ..
ಜೀವನಕ್ಕೆ ಸುಂದರವಾದ ಸ್ನೇಹದ ಬಣ್ಣ ತುಂಬಿದೆ
ಸಪ್ತ ಸ್ವರಗಳ ಮಾಧುರ್ಯ ಮಿಡಿದೆ
ನಿನ್ನ ಬಗ್ಗೆ ಬರೆದು ಬರೆದು
ಎಂದು ದಣಿವಾಗಲೇ ಇಲ್ಲ
ಈ ಲೇಖನಿಗೆ ಎಂದು ಪದಗಳ
ಕೊರತೆ ಎದುರಾಗಲೇ ಇಲ್ಲ
ಬರೆದಷ್ಟು ಕವಿತೆಗಳ ಲೆಕ್ಕ ಹೆಚ್ಚಾಗುತ್ತಲೇ ಇವೆ
ಮಾತಾಡಿದಷ್ಟು ಸ್ನೇಹ ಗಟ್ಟಿಯಾಗುತ್ತಲೇ ಇದೆ
ನಿನ್ನ ಜೊತೆ ಜೊತೆಗೆ ನಡೆಯುತಿರಲು
ದಣಿವಿನ ಮಾತೆಲ್ಲಿ
ನೀ ನನ್ನ ಮೊಗದ ನಗುವಾಗಿರಲು
ಅಳುವ ಮಾತೆಲ್ಲಿ
ನೀನೇ ಪ್ರೀತಿಯಾಗಿರಲು
ಧ್ವೇಷಕೆ ಜಾಗವೆಲ್ಲಿ
ಈ ಮಧುರವಾದ ಭಾಂಧವ್ಯ
ಸದಾಕಾಲ ಹೀಗೆ ಇರಲಿ
ನಮ್ಮ ಹಾಲು ಜೇನಿನಂತ ಸ್ನೇಹ
ಇದೆ ರೀತಿ ಜನುಮ ಜನುಮದಲ್ಲು
ನಮಗೆ ಸಿಹಿ ಹಂಚುತಿರಲಿ...
ನನ್ನ ಪ್ರಿಯ ಗೆಳೆಯ..
U R THE BEST


No comments:
Post a Comment