ಖಾಲಿಯಾಗಿವೆ ಪದಗಳು ಬತ್ತಳಿಕೆಯಲ್ಲಿ
ಮಾತೆ ಮೂಡುತ್ತಿಲ್ಲ ನೀರವತೆಯ ಸಂಗದಲ್ಲಿ
ಕೇಳಲು ಏನು ಉಳಿದಿಲ್ಲ..
ಹೇಳಲು ಮೌನದ ಸಮ್ಮತಿಯಿಲ್ಲ
ಸ್ನೇಹ ಸತ್ತು ಬಹಳವೇ ಸಮಯವಾಗಿದೆ
ಇನ್ನು ಸ್ಮಶಾನ ಮೌನ
ಸೂತಕದ ಛಾಯೆ...
ಹೃದಯ ರೋಧನಕ್ಕೆ ಎಲ್ಲಿದೆ ಕೇಳುವ ಕಿವಿ
ಕೇಳಿದ ಕಿವಿಗಳೆಲ್ಲ ಕಿವುಡು
ನೋಡುವ ನೋಟವೆಲ್ಲ ಕುರುಡು
ಇಟ್ಟ ಹೆಜ್ಜೆಯೆಲ್ಲ ಅದೇ ದಾರಿ
ಗುನುಗುವ ಹೃದಯದ ಮಾತುಗಳೇ
ನನ್ನೊಡಲ ಸಂಗಾತಿ
ಮೂಡಿದ ಮನದ ಭಾಷೆಯೇ
ನನ್ನೆದೆಯ ಸಂಗತಿ
ನಿಂತಲ್ಲೇ ಸುಮ್ಮನೆ ನಿಂತೇ
ನನ್ನೊಡನೆ ನನ್ನ ಘನ ಘೋರ ಯುದ್ದ
ನಡೆವಾಗ ಹುಚ್ಚು ರೋಷ
ಗಾಳಿಯೊಡನೆ ಗುದ್ದಾಟ
ಸುಸ್ತಾದಾಗ ಏನೋ ಪೇಚಾಟ
ಸುಮ್ಮನೆ ಕುಳಿತೆ..
ಶೂನ್ಯದೆಡೆಗೆ ನೆಟ್ಟಿದೆ ನೋಟ
ಯಾರಿಗೂ ಅರ್ಥವಾಗದ ಒಗಟು
ನನ್ನ ಹುಚ್ಚು ಪ್ರೀತಿಯ ಗುಟ್ಟು
ಸ್ನೇಹ ಸತ್ತು ಬಹಳವೇ ಸಮಯವಾಗಿದೆ
ReplyDeleteಇನ್ನು ಸ್ಮಶಾನ ಮೌನ
ಸೂತಕದ ಛಾಯೆ...
ಹೃದಯ ರೋಧನಕ್ಕೆ ಎಲ್ಲಿದೆ ಕೇಳುವ ಕಿವಿ
ಕೇಳಿದ ಕಿವಿಗಳೆಲ್ಲ ಕಿವುಡು
ನೋಡುವ ನೋಟವೆಲ್ಲ ಕುರುಡು... Nice rajani ... keep writing
ಯಾರಿಗೂ ಅರ್ಥವಾಗದ ಒಗಟು
ReplyDeleteನನ್ನ ಹುಚ್ಚು ಪ್ರೀತಿಯ ಗುಟ್ಟು
ನಿಜಕ್ಕೂ ಹಾಂ.....
hey simply superb.....!!!!