Wednesday, July 27, 2011

ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...



ಮಾತೆ ಅರ್ಥವಾಗದವನಿಗೆ..
ಮೌನವೇನು ಅರ್ಥವಾದೀತು...?
ಇಷ್ಟು ದಿನದ ಸ್ನೇಹದ ಬೆಲೆ ಮರೆತು ಹೋದವನಿಗೆ
ಚುಚ್ಚು ನುಡಿಗಳ ಗಾಯದ ನೋವೇನು ತಿಳಿದೀತು..

ಬರಿ ತನ್ನ ನೋವೆ ಹಿರಿದೆನ್ನುವವನಿಗೆ
ತಾನು ಇನ್ನೊಬ್ಬರ ನೋಯಿಸಿದ್ದರ ಪರಿವೆ ಎಲ್ಲಿದ್ದೀತು?
ಬೇರೆಯವರ ತಪ್ಪೆ ದೊಡ್ಡದು ಎನ್ನುವವನಿಗೆ
ತನ್ನ ತಪ್ಪಿನ ತಿಳುವಳಿಕೆ ಎಲ್ಲಿದ್ದೀತು?

ಕೋಪದಲ್ಲಿ ಮೂಗನ್ನು ಕೊಯ್ದುಕೊಳ್ಳುವವನಿಗೆ
ತನ್ನ ಕೋಪದಲ್ಲಿ ಪ್ರೀತಿಯೇ ಕಾಣದವನಿಗೆ
ತಾನು ಕಳೆದುಕೊಂಡದ್ದರ ಮೌಲ್ಯವೆಲ್ಲಿ ತಿಳಿದೀತು?

ಕೋಪ ನಮ್ಮನ್ನು ಸುಡುತ್ತದೆ..
ಪ್ರೀತಿ ನೆಮ್ಮದಿ ತರುತ್ತದೆ
ಸ್ನೇಹ ಬಾಳಿಗೆ ಅರ್ಥಕೊಡುತ್ತದೆ

ಪ್ರೀತಿ ಹೆಚ್ಚೋ? ಸ್ನೇಹ ಹೆಚ್ಚೋ?
ಎಂಬ ಹುಚ್ಚು ಕಲ್ಪನೆ ಬೇಡ
ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...

ಸಿಹಿ ಸ್ನೇಹವ ನೆನೆ..
ಕಹಿ ಕೋಪವ ಮರೆ...

3 comments:

  1. ಕೋಪದಲ್ಲಿ ಮೂಗನ್ನು ಕೊಯ್ದುಕೊಳ್ಳುವವನಿಗೆ
    ತನ್ನ ಕೋಪದಲ್ಲಿ ಪ್ರೀತಿಯೇ ಕಾಣದವನಿಗೆ
    ತಾನು ಕಳೆದುಕೊಂಡದ್ದರ ಮೌಲ್ಯವೆಲ್ಲಿ ತಿಳಿದೀತು? nice lines ..rajani .. keep writing ,..

    ReplyDelete
  2. ರಜನೀ..... superb....

    ಚಂದ ಚಂದದ ಸಾಲುಗಳು.......

    ನಂಗೆ ತುಂಬಾ ಇಷ್ಟ ಆಯ್ತು....... ಚಿಕ್ಕವಾಗಿ ತುಂಬಾ ಅರ್ಥವತ್ತಾಗಿದೆ....
    once again....

    ನಂಗೆ ಇಷ್ಟವಾಯ್ತು....

    ReplyDelete
  3. thanks alot :) thanks for such wonderful support..

    ReplyDelete