Friday, July 1, 2011

ನಿನ್ನ ಭಾವಗಳ ದೋಚಿ ನಾ ಕವಿಯಾದೆ..




ಎಷ್ಟೊಂದು ಕವಿತೆಗಳು ಮೂಡಿವೆ...
ನಿನ್ನದೇ ಸ್ಪೂರ್ತಿಯಲ್ಲಿ...
ನಾ ಪುಟ್ಟ ಕವಯಿತ್ರಿಯಾದೆ..
ನಿನ್ನ ಭಾವಗಳ ಗೀಚುವುದರಲ್ಲಿ..

ಎಲ್ಲರಿಗೂ ಎಷ್ಟೊಂದು ಮೆಚ್ಚುಗೆ ಎಷ್ಟೊಂದು ಅಚ್ಚರಿ
ನನಗಾಗಿ ಒಂದೇ ಪ್ರಶ್ನೆ ಇದ್ಯಾವ ಭಾವ ರೂಪಾಂತರದ ಪರಿ
ನನಗೂ ತಿಳಿದಿಲ್ಲ ಗೆಳೆಯ ನೀನೇ ಉತ್ತರ ಹೇಳು
ಅದೇ ಸರಿ...

ನಿನ್ನ ಚಿತ್ರ ಗೀಚಲೇ?.. ಭಾವ ದೋಚಲೇ?
ಕನಸುಗಳ ಕದಿಯಲೇ? ನೆನಪಿನ ಚಾದರ ನಿನಗೆಂದೇ ಹೆಣೆಯಲೇ?
ಹಾಡಾಗಿ ನಿನ್ನ ಕರೆಯಲೇ?
ತಂಗಾಳಿಯಾಗಿ ನಿನ್ನ ಬಳಿ ಸುಳಿಯಲೇ?

 ಎಷ್ಟು ಬರೆದರೂ ಮುಗಿಯುತ್ತಲೇ ಇಲ್ಲ...
ನೀ ಮೂಡಿಸಿರುವ ಛಾಪು..
ದಿನಕ್ಕೊಂದು ಭಾವಗಳ ಕದಿಯಿತ್ತಿರುವೆ
ದಿನಕ್ಕೊಂದು ರೂಪು..

ನಿನ್ನ ಭಾವಗಳ ದೋಚಿ ನಾ ಕವಿಯಾದೆ..
ನನ್ನ ಹೃದಯವ ದೋಚಿ ನೀ ನನ್ನ ಸಿರಿಯಾದೆ...

                                                             ***ರಂಜನಿ ಎಸ್ ಬಳಿಸಾವಿರ್***

1 comment:

  1. ನಿನ್ನ ಭಾವಗಳ ದೋಚಿ ನಾ ಕವಿಯಾದೆ..
    ನನ್ನ ಹೃದಯವ ದೋಚಿ ನೀ ನನ್ನ ಸಿರಿಯಾದೆ.. such a nice line.. good , keep writing

    ReplyDelete