Thursday, April 14, 2011

ಹೋಗೋಣವೆ ಸಣ್ಣ ವನವಾಸಕ್ಕೆ..

ಬಾ ಹೋಗೋಣ ಸಣ್ಣ ವನವಾಸಕ್ಕೆ,
ಸ್ವಲ್ಪ ದೂರ ಮಾತು... ಸ್ವಲ್ಪ ದೂರ ಮೌನ,
ಅಲ್ಲಿ ಬರಿ ನಾನು.. ಮತ್ತೆ ನೀನು...
ಹಕ್ಕಿಗಳ ಹಾಡು..ನಮ್ಮ ಪ್ರೀತಿಯ ಜಾಡು,
ಹಸಿರ ಹಾಸು... ಹೂವಿನಂಥ ನಮ್ಮ ಮನಸ್ಸು..
ಹಿತವಾದ ಸುಳಿ ಗಾಳಿ.. ಎಲ್ಲೆಡೆ ನಮ್ಮ ಪ್ರೀತಿಯ ಘಮ..
ಕೈಹಿಡಿದು ನಡೆದಾಗ ಸಪ್ತವರ್ಣದ ಕನಸು..
ಆಹಾ.. ಅದೇಕೋ ಆ ಸೂರ್ಯನಿಗೆ ನಮ್ಮಲ್ಲಿ ಹುಸಿ ಮುನಿಸು..
ಹಸಿರು ಲೋಕದಲ್ಲಿ ಹಿತವಾದ ತಂಪು ಮೌನ..
ಆಗಾಗ ನಮ್ಮ ಪಿಸುಮಾತಿನ, ನಗುವಿನ ಸಂಚಲನ..
ಎಷ್ಟು ಸೊಗಸು ವನರಾಶಿಯ ಸವಿ..
ಸವಿದಷ್ಟು ಮುಗಿಯದ ಪ್ರೀತಿಯ ಸಿರಿಯ ಅಕ್ಷಯ ಪಾತ್ರೆ..
ನಡೆದದೆಷ್ಟೋ.. ಆಡಿದ ಮಾತುಗಲೆಷ್ಟೋ..ಮೌನದ ಹಾಡೆಷ್ಟೋ
ಸೂರ್ಯ ಕೂಡ ಬೇಸರಿಸಿ ಮನೆಯ ಹಾದಿ ಹಿಡಿದಿರುವ,
ಮತ್ತೆ ನಮ್ಮನ್ನು ನಾಳೆ ನೋಡುವ ಕಾತರದಲ್ಲಿರುವ..
ಬಾ ಹೊತ್ತು ಸರಿದರೇನಂತೆ..ನಾಳೆ ಮತ್ತೆ ಜೊತೆಯಾಗುವ..
ಮತ್ತೆ ಹೊಸ ಹಾದಿ ಹಿಡಿಯುವ..  

4 comments:

  1. ನೀವು ಹೇಳಿದ್ದೆಲ್ಲ ಇರೋ ಹಾಗಿದ್ರೆ ವನವಾಸವೇ ಚೆಂದ..:) ಯಾರಿಗೆ ಬೇಕು ಭಾವನೆಗಳೇ ಇಲ್ಲದ ಈ ಜನ ಜಂಗುಳಿಯ ನಡುವೆ ನಗರವಾಸ..:(

    ReplyDelete
  2. ಪ್ರೀತಿ ಎಂದ್ರೆ ಸಾವ ಅಥವ ನೋವ ... ?!!!


    ನೀ ಯಾಕೆ ನನ್ನ ಪ್ರೀತಿಸಿದೆ
    ನನ್ನ ಬಿಟ್ಟು ಹೋಗಲೆಬೇಕೆನ್ದೀರುವಾಗ
    ನೀ ಯಾಕೆ ನನ್ನ ಅಪ್ಪಿದೆ
    ತಪ್ಪಿಸಿಕೊಂಡು ಮರೆಯಾಗಲೆಬೇಕೆನ್ದಿರುವಾಗ
    ಮುಗ್ದ ಮನದ ಗುಡಿಯೊಳಗೆ
    ನಿನ್ನ ನೆನಪನ್ನು ಬಚ್ಚಿ ಇಟ್ಟಿರುವೆ
    ಆ ನಿನ್ನ ನೆನಪಿನ ಗುಡಿಗೆ
    ಕೊನೆವರೆಗೂ ಕಾವಲಿಗನಾಗಿ ನಾ ಕಾಯುವೆ
    ಈ ಮನವ ತೊರೆದು ನೀ ನಿಂತಿರುವೆ
    ನಿನ್ನ ಮದುವೆಯ ಖುಷಿಯಲಿ ನೀನಿರುವೆ
    ಈ ಕಣ್ಣಿನ ಕಣ್ಣಿರು ಬಿಟ್ಟು ಹೋಗಬೇಕೆನ್ದಿರುವೆ
    ಹೋಗುವಾಗ ಹಿಂತಿರುಗಿ ನೋಡದಿರು
    ನಿನಗೆ ನಾ ಕೈ ಮುಗಿದು ಬೇಡುವೆ .........
    ನೀ ಯಾಕೆ ನನ್ನ ಪ್ರೀತಿಸಿದೆ
    ನನ್ನ ಬಿಟ್ಟು ಹೋಗಲೆಬೇಕೆನ್ದೀರುವಾಗ......//......

    ಪ್ರೀತಿಯೀ೦ದ :)
    ರಂಗ

    ReplyDelete